ಹೈಟೆಕ್ ಗೊಳ್ಳುತ್ತಿರುವ ಉಡುಪಿ ಕಾರ್ಕಳ ಬಸ್ಸುಗಳು

ಕೇವಲ ಮಹಾನಗರಿಗಳ ಬಸ್ಸುಗಳಲ್ಲಿ ಮಾತ್ರ ಸೀಮಿತವಾಗಿದ್ದ ಉಚಿತ ವೈಫೈ ಮತ್ತು ಜಿಪಿಎಸ್ ಸೇವೆಯನ್ನು ಹಳ್ಳಿಯ ಜನರಿಗೂ ಸಿಗುವಂತೆ ಮಾಡಿದ ಶ್ರೇಯ ಉಡುಪಿ ಕಾರ್ಕಳ ನಡುವೆ ಸಂಚರಿಸುವ ಶ್ರೀ ಕೃಷ್ಣ ಪ್ರಸಾದ್ ಬಸ್ಸಿನ ನಿರ್ವಾಹಕರಿಗೆ ಸಂದಲೇ ಬೇಕು. ಕೆಲ ತಿಂಗಳ ಹಿಂದೆ ಬಸ್ ಮಾಲಕರ ಸಹಕಾರದೊಂದಿಗೆ ಬಸ್ ಚಾಲಕರು ಮತ್ತು ನಿರ್ವಾಹಕರು ಸೇರಿ ಪ್ರಾರಂಭಿಸಿ ಸುದ್ದಿ ಮಾಡಿದ್ದ WiFi ಸೇವೆಯನ್ನು ಇಂದು GPS ಗೂ ವಿಸ್ತರಿಸಿದ್ದಾರೆ. ಪ್ರಾಯೋಗಿಕವಾಗಿ ಆರಂಭಿಸಿರುವ ಈ ಜಿಪಿಎಸ್ ಸೇವೆಯಿಂದ ಪ್ರಯಾಣಿಕರು ಬಸ್ಸು ಯಾವ ಸ್ಥಳಕ್ಕೆ ಎಷ್ಟು ಸಮಯಕ್ಕೆ ತಲುಪುತ್ತದೆ ಎಂದು ನಿಖರವಾಗಿ ತಿಳಿದುಕೊಳ್ಳಬಹುದಾಗಿದೆ. ಉಚಿತ ವೈಫೈ ಮತ್ತು ಜಿಪಿಎಸ್ ಸೌಲಭ್ಯವು ಪ್ರಯಾಣಿಕರಿಗೆ ಹೊಸ ಅನುಭವ ನೀಡಿ ಅವರ ಪ್ರಯಾಣ ಸುಖಕರವಾಗಿಸುವ ಉದ್ದೇಶದೊಂದಿಗೆ ಪ್ರಾರಂಭಿಸಿದ ಈ ಸೇವೆ ಯಶಸ್ವಿಯಾಗಲೆಂದು ಕೋರುತ್ತೇವೆ.


Krishna Bus GPS Tracking



ಉಡುಪಿ ಕಾರ್ಕಳ ನಡುವೆ ಸಂಚರಿಸುವ ಶ್ರೀ ಕೃಷ್ಣ ಪ್ರಸಾದ್ ಬಸ್ಸನ್ನು ಟ್ರ್ಯಾಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ:
https://peptrack.com/skp

Sri Krishna Prasad bus commuting between Karkala Bailur Palli Moodubelle Udupi equipped with Free WiFi and GPS tracking service.

Comments

Popular posts from this blog

Peptrack GPS Location Tracking Device Installation Guide

GPS Vehicle Tracking System For Sand Quarry Mining Industry AIS-140

Peptrack GPS Tracking Services